ಮಾಯಾರಾವ್
	1928-. ಕಥಕ್ ನೃತ್ಯ ಗುರು ಮಾಯಾರಾವ್, ರಾಜ್ಯ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾದ ಕನ್ನಡಿಗರು. ಯಕ್ಷಗಾನ, ಭರತನಾಟ್ಯಗಳ ನಾಡಿನಲ್ಲಿ ಹುಟ್ಟಿದರೂ ಅಭಿವ್ಯಕ್ತಿಗೆ ಆರಿಸಿಕೊಂಡಿದ್ದು ಉತ್ತರ ಭಾತರದ ಕಥಕ್ ನೃತ್ಯ ಸಂಪ್ರದಾಯವನ್ನು. ಆ ನೃತ್ಯಸಂಪ್ರದಾಯದ ಆದಿಪ್ರವತ್ತಕರ ಮನೆತನಕ್ಕೆ ಸೇರಿದ ಗುರುಗಳಿಂದ ಶಿಕ್ಷಣ ಪಡೆದ ಅದನ್ನು ಪರಿಚಯಿಸುತ್ತಿರುವರು.

	ಮಾಯಾರವ್ ಹುಟ್ಟಿದ್ದು ಬೆಂಗಳೂರಿನಲ್ಲಿ 1928ರ ಮೇ 22ರಂದು. ತಂದೆ ಹಟ್ಟಿಅಂಗಡಿ ಸಂಜಿವರಾಯರು ಇಂಜಿನಿಯರರು, ಮಿಲಿಟರಿ ಗುತ್ತಿಗೆದಾರರು. ತಾಯಿ ಗೃಹಿಣಿ ಲಲಿತಾಬಾಯಿ. ಸಂಪ್ರದಾಯಸ್ಥ ಸಾರಸ್ವತ ಬ್ರಾಹ್ಮಣ ಕುಟುಂಬ. ಆರು ಮಕ್ಕಳಲ್ಲಿ ಮೂರನೆಯವರು ಮಾಯಾ. ನಾಟಕ, ಸಿನಿಮಾ, ನೃತ್ಯಗಳ ಬಗೆಗೆ ಹೀನಾಯ ಭಾವ ಇದ್ದ ಕಾಲದಲ್ಲಿ ಶಿಷ್ಟಮನೆತನಕ್ಕೆ ಸೇರಿದ ಹೆಣ್ಣುಮಕ್ಕಳು ನೃತ್ಯ ಕಲಿಯುವುದು ಕಲ್ಪನೆಗೂ ಮೀರಿದ ವಿಚಾರ. ಕುಟುಂಬ ಮಿತ್ರರರಾದ ವಿಶ್ವವಿಖ್ಯಾರ ನೃತ್ಯಪಟು ರಾಮಗೋಪಾಲ್ ಶಿಫಾರಸ್ಸಿನ ಮೇಲೆ ತಮ್ಮ ಕಿರಿಯ ಹೆಣ್ಣು ಮಕ್ಕಳಾದ ಉಮಾ ಮತ್ತು ಚಿತ್ರಾರನ್ನು ರಾಮಗೋಪಾಲ್ ತಂಡದಲ್ಲಿದ್ದ ಸೋಹನ್‍ಲಾಲ್‍ರಲ್ಲಿ ನೃತ್ಯಾಭ್ಯಾಸ ಮಾಡಲು ಸಂಜಿವರಾಯರು ಅನುಮತಿ ನೀಡಿದರು. ರಾಮ್‍ರಾವ್ ಹೊನ್ನಾವರ ಬಳಿ ಹಿಂದುಸ್ತಾನಿ ಸಂಗೀತ ಮತ್ತು ದಿಲ್ರೂಬಾ ಕಲಿಯುತ್ತಿದ್ದ 14ರ ಕಿಶೋರಿ ಮಾಯಾ ಅವರಿಗೂ ನೃತ್ಯದಲ್ಲಿ ಆಸಕ್ತಿ ಮೂಡಿತು. ನೃತ್ಯ ಕಲಿಯಲು ಮನೆಯವರ ಒಪ್ಪಿಗೆ ದೊರೆಯಿತು. ಆದರೆ ಸಾರ್ವಜನಿಕ ಪ್ರದರ್ಶನ ಕೂಡದೆಂಬ ನಿರ್ಬಂಧ. ಜಯಪುರ ಘರಾನೆಯ ಜಯ್‍ಲಾಲ್‍ರರ ಶಿಷ್ಯರಾದ ಸೋಹನ್‍ಲಾಲ್ ಮಾಯಾ ಸೋದರಿಯವರಿಗೆ 1942ರಿಂದ 45ರವರೆಗೆ ನೃತ್ಯ ಕಲಿಸಿದರು. ಸೋಹನ್‍ಲಾಲ್ ಸಿನಿಮಾ ಕ್ಷೇತ್ರಕ್ಕೆ ಸೇರಿದ ಮೇಲೆ ಮಾಯಾ ತಮ್ಮ ಸಾಧನೆಯನ್ನು ತಾವೇ ಮುಂದುವರಿಸಿದರು. ನೃತ್ಯ ಕಾರ್ಯಕ್ರಮಗಳನ್ನು ನಿಡಿದರು. ಈ ಸಂದರ್ಭದಲ್ಲೇ ಎಂ.ಎಫ್.ನಟರಾಜರ ಪರಿಚಯವಾಯಿತು. ನಟರಾಜ್ ಈ ವೇಳೆಗೆ ವಾದ್ಯ ಮೇಳವನ್ನು ಸಂಘಟಿಸಿದ್ದರು.ಅವರ ಸರಸ್ವತಿ ಆಕೇಸ್ಟ್ರಾ ಪ್ರಖ್ಯಾತವಾಗಿತ್ತು. ರಾಮ್‍ಗೋಪಾಲ್ ಅವರಂತಹ ಖ್ಯಾತ ನೃತ್ಯ ಪಟುಗಳಿಗೆ ಹಿಮ್ಮೇಳವನ್ನು ನೀಡುತ್ತಿತ್ತು. ನಟರಾಜ್ ಮಾಯಾ ಸೇರಿ 1947ರಲ್ಲಿ ಹುಟ್ಟು ಹಾಕಿದ್ದ ಸಂಸ್ಥೆ. ನಾಟ್ಯ ಸರಸ್ವತಿ. ಈ ಸಂಸ್ಥೆಯ ಮೂಲಕ ನೃತ್ಯ ಶುಕ್ಷಣ ಮತ್ತು ಪದರದರ್ಶನ ಎರಡೂ ನಡೆಯುತ್ತಿದ್ದವು. ನಾಟ್ಯ ಸರಸ್ವತಿಯ ನೃತ್ಯ ರೂಪಕಗಳು ಪೌರಾಣಿಕ, ಸಾಮಾಜಿಕ, ಹೀಗೆ ವಸ್ತು ವೈವಿಧ್ಯಮಯವಾಗಿದ್ದುವು.

ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. ಆನರ್ಸ್ ಪದವಿ ಪಡೆದ ನಂತರ ರಾಜಸ್ಥಾನದ ಜಯಪುರದ ಮಹಾರಾಣಿ ಗಾಯತ್ರಿದೇವಿ. ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ತಮ್ಮ ಕಥಕ್ ನೃತ್ಯ ಶಿಕ್ಷಣವನ್ನು ಮುಂದುವರಿಸಬಹುದೆಂಬ ಆಸೆ ಚಿಗುರಿತು. ಜೈಲಾಲ್, ಸುಂದರಪ್ರಸಾದರಂತಹ ಖಾನ್‍ದಾನಿಗುರುಗಳೆಲ್ಲಾ ಆ ವೇಳೆಗೆ ಮುಂಬೈ ಕಲ್ಕತ್ತಾ ಸೇರಿದ್ದರು. ಜಯಪುರರ ಉದ್ಯೋಗ ಹಿತವೆನಿಸಿಲಿಲ್ಲ. ಎರಡು ವರ್ಷಗಳ ನಂತರ ಕೆಲಸ ಬಿಟ್ಟು ಅಣ್ಣ ಮನೋಹರನ ಆಮಂತ್ರಣದ ಮೇರೆಗೆ ಸಿಲೋನಿಗೆ ತೆರಳಿದರು. ಅಲ್ಲಿ ಚಿತ್ರಸೇನಾ ನಜೀರಾ ಅವರ ಬಳಿ ಕಾಂಡ್ಯನ್ ನೃತ್ಯಭ್ಯಾಸ ಮಾಡಿದರು. 

ಕೇಂದ್ರ ಸರಕಾರ ಗುರುಶಿಷ್ಯ ಪರಂಪರೆಯಲ್ಲಿ ನೃತ್ಯಾಭ್ಯಾಸ ಮಾಡಲು ಶಿಷ್ಯವೇತನ ನೀಡುವ, ಅದೇ ತಾನೆ ಯೋಜನೆ ಆರಂಭಿಸಿತ್ತು. ಈ ಯೋಜನೆಯ ಪ್ರಾಥಮ ಫಲಾನುಬವಿ ಮಾಯಾ ಲಕ್ನೋ ಘರಾನೆಯ ಶಂಭು ಮಹಾರಾಜರ ಶಿಷ್ಯರಾಗುವ ಸುಯೋಗ. ಎರಡು ವರ್ಷಗಳ ಶಿಷ್ಯವೇತನ. ನಾಲ್ಕು ವರ್ಷಕ್ಕೆ ವಿಸ್ತರಿಸಿತು. ಅನಂತರ ಮತ್ತೆ ಎರಡು ವರ್ಷಗಳ ಕಾಲ ಜಯಪುರ ಘರಾನೆಯ ಸುಂದರ ಪ್ರಸಾದದ ಶಿಷ್ಯಯಾಗುವ ಸುಯೋಗ. ಈ ಇಬ್ಬರು ಮಹಾನ್ ಕಲಾವಿದರು ತಮ್ಮ ವಿದ್ಯೆಯನ್ನು ಪುತ್ರ ವಾತ್ಸಲ್ಯದಿಂದ, ಮುಕ್ತ ಮನಸ್ಸಿನಿಂದ ಧಾರೆಯೆರೆದರು. 

ಗುರು ಶಂಭು ಮಹಾರಾಜರಿಂದ ಅಭಿನಯ ಸುಂದರ ಪ್ರಸಾದದಿಂದ ಲಯಕಾರಿ, ಅಮದ್, ತುಕಡಾ, ತರಾನ, ಧ್ರುಪದ್ ಮತ್ತು ಧಮಾರ್‍ಗಳನ್ನು ವಿಶೇಷವಾಗಿ ತರಬೇತಿ ಪಡೆದರು. ಅವರಿಗೆ ಕಥನ ರೂಪಕಗಳನ್ನು ಕಲಿಸಲಿಲ್ಲ. ಆದರೆ ಅವರ ಸೃಜನ ಶೀಲತೆಗೆ ಭದ್ರ ಬುನಾದಿ ಹಾಕಿದರು. ಮಾಸ್ಕೋದ ಇನ್‍ಸ್ಟಿಟ್ಯೂಟ್ ಆಫ್ ಥೊಯೇಟರ್ ಆಟ್ರ್ಸ್‍ನಲ್ಲಿ ರಂಗತಂತ್ರ ಹಾಗೂ ನೃತ್ಯ ಸಂಯೋಜನೆ (ಕೋರಿಯಾಗ್ರಫಿ) ತರಬೇತಿ ಪಡೆಯಲು ರಷ್ಯಾ ಸರ್ಕಾರದ ವಿದ್ಯಾರ್ಥಿವೇತನ ಪಡೆದ ಪ್ರಥಮ ಮಹಿಳೆ ಮಯಾರಾವ್. 

ವಿದ್ಯಾರ್ಥಿ ದೆಸೆಯಲ್ಲಿ ನಡೆಸಿದ ನೃತ್ಯಸಂಯೋಜನೆಗಳು 1800 ಅಭ್ಯರ್ಥಿಳಲ್ಲಿ ಮೊದಲಿಗರಾಗಲು ನೆರವಾದವು. 1960ರಿಂದ 64ರವರೆಗೆ ನೃತ್ಯ ಸಂಯೋಜನೆ, ರಂಗಭೂಮಿಯ ತಂತ್ರ ಮುಂತಾದವುಗಳಲ್ಲಿ ಪ್ರಸಿದ್ಧ ಗುರುಗಳಿಂದ ಮಾರ್ಗದರ್ಶನ ನೀಡಿದರು. ಸ್ನಾತಕೋತ್ತರ ಸರ್ಟಿಫಿಕೇಟ್ ಪ್ರಶಸ್ತಿ ಪಡೆದರು. ರಷ್ಯಾದವರು ಮಾಯಾರವರ ಪ್ರತಿಭೆಯನ್ನು ಮೆಚ್ಚಿದರು. ರಾಮಾಯಣ ಮತ್ತು ಶಕುಂತಲಾ ನೃತ್ಯ ರೂಪಕಗಳನ್ನು ರೂಪಿಸುವಾಗ ಅವರು 1964 ಮತ್ತು 1979ರಲ್ಲಿ ಮಾರ್ಗದರ್ಶನಕ್ಕಾಗಿ ಮಾಯಾರವರನ್ನು ಕರೆಸಿಕೊಂಡಿದ್ದರು.       
  
ಮೈಸೂರಿನಲ್ಲಿ ನಡೆದ ಅಂತರ್‍ರಾಷ್ಟ್ರೀಯ ನೃತ್ಯ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಗೌರವಾನ್ವಿತ ಅಥಿತಿಯಾಗಿ 1969 ಮತ್ತು 1981ರಲ್ಲಿ ಮಾಯಾರವರನ್ನು ರಷ್ಯಾ ಆಮಂತ್ರಿಸಿ ಗೌರವಿಸಿದರು. 
ರಷ್ಯಾದಿಂದ ಮರಳಿದ ಮೇಲೆ ಭಾರತೀಯ ಕಲಾ ಕೇಂದ್ರದಲ್ಲಿ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಗದೆ ಹೋಯಿತು. ಆಗ ಸಂಗೀತ ನಾಟಕ ಅಕಾಡೆಮಿಯ ಉಪಾಧ್ಯಕ್ಷರು, ನಾಟ್ಯ ಸಂಘದ ಅಧ್ಯಕ್ಷರೂ, ಆಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ  ಅವರ ನೆರವಿನೊಂದಿಗೆ ನಾಟ್ಯ ಇನ್‍ಸ್ಟಿಟ್ಯೂಟ್ ಆಫ್ ಕೋರಿಯಾಗ್ರಫಿಯನ್ನು 1964ರ ಅಗಸ್ಟ್ 17ರಂದು ಆರಂಭಿಸಿದರು. ಕಮಲಾಲಾಲ್ ಅನಿಲ್ ಬಸ್ವಾನ್ ಇಂದನ್ ರಾಜರಾನ್ ಇವರ ಬೆಂಬಲದಿಂದ ಆರಂಭವಾದ ಸಂಸ್ಥೆ ನೃತ್ಯಶಿಕ್ಷಣ ಹಾಗೂ ನೃತ್ಯ ರೂಪಕಗಳ ಪ್ರದರ್ಶನದಲ್ಲಿ ತೊಡಗಿತು.

1947ರಲ್ಲಿ ಪರಿಚಯನಾಗಿ ಆತ್ಮೀಯಗೆಳಯರಾಗಿದ್ದ ನಟರಾಜನನ್ನು ಅವರ ಏಕೈಕ ಪುತ್ರ ಮಧು ನಟರಾಜ್. ತಾಯಿಯ ನೆರಳಲ್ಲಿ ಬೆಳೆದು ಕಥಕ್ ನೃತ್ಯವಲ್ಲದೆ, ಆಧುನಿಕ ನೃತ್ಯ ಶೈಲಿಯಲ್ಲೂ ಕೃಷಿ ಮಾಡಿದ್ದಾರೆ. ತಮ್ಮ ಪತಿ ಹ್ಯಾರಿ ಜೊತೆ ಸೇರಿ ಸ್ಟೆಮ್ ನೃತ್ಯ ತಂಡ ರೂಪಿಸಿ ದೇಶವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. 

ದೆಹಲಿಯಲ್ಲಿದ್ದಾಗ, ವೆಂಕಟೇಶ್ವರ ವಿಲಾಸಂ, ಸೂರದಾಸ್, ತುಲಸಿ ಕೆ. ರಾಮ್, ಊರುಭಂಗ, ಮಾಧ್ಯಮ ವ್ಯಾಯೊಗ, ದೂತವಾಕ್ಯ, ಭಗಗವದ್‍ಜ್ಯೋತಿಯ ಶೃಂಗಾರ ನಾರದ, ಕೃಷ್ಣಾವತಾರ ಮೊದಲಾದ ನೃತ್ಯ ರೂಪಕಗಳನ್ನು ಪ್ರದರ್ಶಿಸಿದರು. ದೆಹಲಿಯಲ್ಲಿ 23 ವರ್ಷಗಳ ಕಾಲ ಕ್ರಿಯಾಶಿಲವಾಗಿದ್ದ ಮಾಯಾರವರು ಬೆಂಗಳೂರಿಗೆ ತಮ್ಮ ಕಾರ್ಯಕ್ಷೇತ್ರವನ್ನು ಸ್ಥಳಾಂತರಿಸಿದರು. 1987ರಲ್ಲಿ ಕರ್ನಾಟಕ ಸರಕಾರದ ಬೆಂಬಲದೊಡನೆ ನಾಟ್ಯ ಇನ್‍ಸ್ಟಿಟ್ಯೂಟ್ ಆಫ್ ಕಥಕ್ ಮತ್ತು ಕೋರಿಯಾಗ್ರಫಿ ಬೆಂಗಳೂರಿನಲ್ಲಿ ಅಧಿಕೃತವಾಗಿ ಅಸ್ಥಿತ್ವಕ್ಕೆ ಬಂದಿತು. ಕಥಕ್ ನೃತ್ಯ ಕೋರಿಯಾಗ್ರಫಿಯಲ್ಲಿ ಈ ಸಂಸ್ಥೆ ಪದವಿ ನೀಡುತ್ತಿದೆ. ಇದು ನೀಡುವ ಬ್ಯಾಚುಲರ್ ಡಿಗ್ರಿಪದವಿಗೆ ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯತೆ ಇದೆ. ಕೇಂದ್ರ ಸರಾಕಾರ ಅಮೆರಿಕ, ಯುರೋಫ್, ಕೆನಡ ಮೊದಲಾದ ದೇಶಗಳ ಸರಕಾರಗಳ ಹಾಗೂ ಖಾಸಗಿ ಸಂಸ್ಥೆಗಳ ಶಿಷ್ಯವೇತನ ಪಡೆದು ಅನೇಕ ಮಂದಿ ಇಲ್ಲಿ ನೃತ್ಯ ಶಿಕ್ಷಣ ಪಡೆಯುತ್ತಿದ್ದಾರೆ. ಸುಮಾರು 2500ಮಂದಿ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದು, ನೃತ್ಯ ಗುರುಗಳಾಗಿ, ಸಂಯೋಜಕರಾಗಿ ದೇಶ ವಿದೇಶಗಳಲ್ಲಿ ಪ್ರಸಿದ್ಧರಾಗಿದ್ದಾರೆ.

1986ರಲ್ಲಿ ಮಾಯಾರಾವ್ ಲಂಡನ್ನಿನ ಭಾರತೀಯ ವಿದ್ಯಾಭವನದ ಆಮಂತ್ರಣದ ಮೇರೆಗೆ ಬ್ರಿಟನ್ನಿನಲ್ಲಿ ಕಥಕ್ ನೃತ್ಯದ ಬಗೆಗೆ ಕಾರ್ಯಾಗಾರ ನಡೆಸಿದರು. ಅಮೆರಿಕದ ಈಸ್ಟ್‍ವೆಸ್ಟ್ ಶಾಲೆ ಮತ್ತಿತರ ಸಂಘ ಸಂಸ್ಥೆಗಳ ಆಹ್ವಾನದ ಮೇಲೆ 1994 ಮತ್ತು 1995ರಲ್ಲಿ ವಾಷಿಂಗ್‍ಟನ್ ಮತ್ತಿತರ ಕಡೆ ಕಥಕ್ ನೃತ್ಯದ ಕಾರ್ಯಾಗಾರ  ನಡೆಸಿದರು. ಮೀರಾ, ವಿಕ್ರಮಾದಿತ್ಯ ಮೊದಲಾದ ನೃತ್ಯ ರೂಪಕಗಳ ಸಂಯೋಜನೆ ಮಾಡಿ ಪ್ರದರ್ಶಿಸಿದರು. 

ನಾಟ್ಯ ಇನ್‍ಸ್ಟಿಟ್ಯೂಟ್ ಆಫ್ ಕಥಕ್ ಮತ್ತು ಕೊರಿಯಾಗ್ರಫಿಯ ಪ್ರದರ್ಶನ ವಿಭಾಗ ದೇಸ ವಿದೇಶಗಳಲ್ಲಿ ಪ್ರಸಿದ್ಧ. ಇದಕ್ಕೆ ಮಾಯಾರಾವ್ ಈ ವಿಭಾಗದ ನಿರ್ದೇಶಕರು. ಭಾರತದ ವಿದೇಶಾಂಗ ಇಲಾಖೆಯ ಅಂಗಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಮತ್ತಿತರ ಸಂಸ್ಥೆಗಳ ಸುಮಾರು 28 ರಾಷ್ಟ್ರಗಳಲ್ಲಿ ನಾಟ್ಯ ಇನ್‍ಸ್ಟಿಟ್ಯೂಟ್ ಆಫ್ ಪ್ರದರ್ಶನ ನೀಡಿ ಭಾರತದ ಸಾಂಸ್ಕøತಿಕ ಪರಂಪರೆಯ ಪರಿಚಯಸಿದೆ.

ಭಾರತೀಯ ನೃತ್ಯ ಪರಂಪರೆ ಹೊಯ್ಸಳ ವೈಭವ, ಅಮೀರ್ ಖುಸ್ರು, ಕಥಕ್ ನೃತ್ಯ ಪರಂಪರು, ವಿಜಯನಗರ ವೈಭವ, ಸಾರೆಯಹಾಂಸೆ ಅಚ್ಚಾ ಇವು ಈ ಸಂಸ್ಥೆಯ ಕೆಲವು ಪ್ರಮುಖ ನೃತ್ಯ ರೂಪಕಗಳು. ಕೆ.ವಿ.ಪುಟ್ಟಪ್ಪ (ರಾಮಾಯಣ ದರ್ಶನಂ), ಮಾಸ್ತಿವೆಂಕಟೇಶ ಅಯ್ಯಂಗಾರ್ (ಕಾಮನಬಿಲ್ಲು), ಡಾ. ಅನಂತ ಮಾನನ್ (ಶ್ರೀ ತುಲಸಿ), ಮೊದಲಾದವರ ರಚನೆಗಳ ರೂಪಕಗಳು ಸೇರಿದಂತೆ 50 ನೃತ್ಯ ರೂಪಕಗಳನ್ನು ಈ ಸಂಸ್ಥೆ ಪ್ರದರ್ಶನದ ಪಟ್ಟಿಯಲ್ಲಿವೆ.

1989-90ರ ಅವಧಿಗೆ ಮಾಯಾರಾವ್ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಹಲವು ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಮಾಯಾರಾವ್ ಅವರ ಸಾಧನೆಗೆ ಅವರಿಗೆ ವಿದ್ಯಾರ್ಥಿಯಾಗಿದ್ದಾಗಿನಿಂದಲ್ಲೂ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಹೆಲ್ಸಿಂಕಿಯಲ್ಲಿ 1962ನಡೆದ ವಿಶ್ವ ರಂಗೋತ್ಸವದಲ್ಲಿ ಅವರ ಏಕವ್ಯಕ್ತಿ ಪ್ರದರ್ಶಗಳಕ್ಕೆ ಸ್ವರ್ಣ ಪದಕ ಪಡೆದಿದ್ದಾರೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಿಂದ ಮಾಯಾರವರನ್ನು ಗೌರವಾನ್ವಿತ ವಿಶ್ರಾಂತಿ ಪ್ರಾಧ್ಯಾಪಕಿಯೆಂದೂ ಪುರಸ್ಕರಿಸಿದೆ. ದೆಹಲಿಯ ಸಾಹಿತ್ಯ ಕಲಾ ಪ್ರಶಸ್ತಿ (1985) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1986), ದೆಹಲಿಯ ಕೋರೊಫೆಸ್ಟ್ ಪ್ರಶಸ್ತಿ (1996) ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1968) ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1989) ಮತ್ತು ಕರ್ನಾಟಕದ ಪ್ರತಿಷ್ಠಿತ ನಾಟ್ಯ ರಾಣಿ ಶಕುಂತಲಾ ಪ್ರಶಸ್ತಿ (2000) ಇವು ಅವರಿಗೆ ಲಭ್ಯವಾದ  ಪ್ರಮುಖ ಪ್ರಶಸ್ತಿಗಳು. 
(ಎ.ವಿ.ಕೆ.; ಎಂಬಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ